ಕರ್ತನಾದ ಯೆಹೋವನು ಹೀಗನ್ನುತ್ತಾನೆ - ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳವರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು, ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರತರುವರು. 23ರಾಜರು ನಿನಗೆ ಸಾಕುತಂದೆಗಳು, ಅವರ ರಾಣಿಗಳು ನಿನಗೆ ಸಾಕುತಾಯಿಯರು ಆಗುವರು; ನಿನಗೆ ಸಾಷ್ಟಾಂಗವಾಗಿ ಅಡ್ಡಬಿದ್ದು ನಿನ್ನ ಪಾದಧೂಳಿಯನ್ನು ನೆಕ್ಕುವರು; ನಾನೇ ಯೆಹೋವನು. ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡರು ಎಂದು ನಿನಗೆ ಗೊತ್ತಾಗುವದು. ಶೂರನಿಂದ ಕೊಳ್ಳೆಯನ್ನು ಕಸುಕೊಳ್ಳಬಹುದೇ? ಭೀಕರನಿಗೆ ಸೆರೆಯಾದವರನ್ನು ಬಿಡಿಸಲಾದೀತೇ [ಎಂದುಕೊಳ್ಳುತ್ತೀಯಾ]? 25ಯೆಹೋವನು ಹೀಗನ್ನುತ್ತಾನೆ - ಶೂರನ ಸೆರೆಯವರೂ ಅಪಹರಿಸಲ್ಪಡುವರು, ಭೀಕರನ ಕೊಳ್ಳೆಯೂ ತೆಗೆಯಲ್ಪಡುವದು; ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು. ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಮಾಡುವೆನು; ದ್ರಾಕ್ಷಾರಸವನ್ನು ಕುಡಿಯುವ ಹಾಗೆ ಅವರು ಸ್ವಂತ ರಕ್ತವನ್ನು ಕುಡಿದು ಅಮಲೇರುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನರಜನ್ಮದವರೆಲ್ಲರಿಗೂ ಗೊತ್ತಾಗುವದು. Isaiah / ಯೆಶಾಯ 49 : 22 - 26
Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.
#dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Isaiah49v22 #13September2024 #promisewordforseptember
Published on 6 months ago
If you like Podbriefly.com, please consider donating to support the ongoing development.
Donate